ಸಮಾನ ಶಿಕ್ಷಣ ಸಮಾನತೆಯ ಸಮಾಜ
ದಯವಿಟ್ಟು
ಪೂರ್ತಿ ಓದಿ, ತಪ್ಪದೇ ಪ್ರತಿಕ್ರಿಯಿಸಿ.
ಶಿಕ್ಷಣದ ಮಾರಾಟವನ್ನು ತಡೆಗಟ್ಟಲು,
ಸಮಾನವಾದ ಶೈಕ್ಷಣಿಕ ಅವಕಾಶಗಳು ಎಲ್ಲರಿಗೂ ದೊರಕುವ ವ್ಯವಸ್ಥೆ ರೂಪಿಸಲು ನವೆಂಬರ್ 2 ರಿಂದ ಡಿಸೆಂಬರ್
4 ರವರೆಗೆ ಅಖಿಲಭಾರತ ಸಮಾನ ಶಿಕ್ಷಣ ಜಾಥಾ ದೇಶಾದ್ಯಂತ ನಡೆಯುತ್ತಿದೆ. ಅಖಿಲ ಭಾರತ ಸಮಾನ ಶಿಕ್ಷಣ
ವೇದಿಕೆ (all India forum for right to education) ಇದನ್ನು ನಡೆಸುತ್ತಿದ್ದು ಕರ್ನಾಟಕದಲ್ಲಿ
ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಕೈಜೋಡಿಸಿದೆ. ಜಾಥಾದ ಕೇಂದ್ರ ತಂಡ ನವೆಂಬರ್ 11 ಕ್ಕೆ ಕರ್ನಾಟಕಕ್ಕೂ
ಬರಲಿದೆ. ಇಡೀ ತಿಂಗಳು ಪೂರ್ತಿ ಕರ್ನಾಟಕದಾದ್ಯಂತ ಸಂಚರಿಸಲಿದೆ. ಕೊನೆಯಲ್ಲಿ ಡಿಸೆಂಬರ್ 3-4ರಂದು
ಮಧ್ಯಪ್ರದೇಶದ ಭೋಪಾಲ್ ನಲ್ಲಿ ರಾಷ್ಟ್ರಮಟ್ಟದ ಹಕ್ಕೋತ್ತಾಯ ಸಮಾವೇಶ ನಡೆಯಲಿದೆ. ಬನ್ನಿ ಜಾಥದಲ್ಲಿ
ಭಾಗವಹಿಸೋಣ,, ಸಮಾನ ಶಿಕ್ಷಣದ ಜಾರಿಯ ಅವಶ್ಯಕತೆಯನ್ನು ಸಾರಿ ಹೇಳೋಣ.. ಆಳುವವರಿಗೆ ಬಿಸಿ ಮುಟ್ಟಿಸೋಣ.
(ಜಾಥದ ಭಾಗವಾಗಿ ಸಮಾನ ಶಿಕ್ಷಣ ಕುರಿತು ಬಹಿರಂಗ ಸಭೆಗಳು, ಹೋರಾಟಗಳು, ಪ್ರತಿಭಟನೆಗಳು, ಮೆರವಣಿಗೆಗಳು,
ವಿಚಾರಸಂಕಿರಣಗಳು, ಕಾರ್ಯಾಗಾರಗಳು, ಸಾಕ್ಷ್ಯಚಿತ್ರ
ಪ್ರದರ್ಶನ, ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ)
ಜಾಥಾದ ಯೋಜನೆ: ನವೆಂಬರ್ 11 ರಿಂದ
16ರವರೆಗೆ ದಕ್ಷಿಣ ಕರ್ನಾಟಕ
- ನವೆಂಬರ್ 11 : ಮೈಸೂರು, ಶ್ರೀರಂಗಪಟ್ಟಣ, ಕೆ.ಆರ್ ಪೇಟೆ 7353770202
- ನವೆಂಬರ್ 12 : ಮಂಡ್ಯ, ಪಾಂಡವಪುರ 8892939771
- ನವೆಂಬರ್ 13 : ರಾಮನಗರ ಚನ್ನಪಟ್ಟಣ, ತಿಪಟೂರು, ತುಮಕೂರು, ಹಾಸನ 9880453799, 9845250955
- ನವೆಂಬರ್ 14 : ಬೆಂಗಳೂರು, ಐಐಎಸ್ಸಿ, ಹೊಸಕೋಟೆ 7353770204
- ನವೆಂಬರ್ 15 : ಕೋಲಾರ, ಕೆ.ಜಿ.ಎಫ್, ಬಂಗಾರಪೇಟೆ 9449041430
- ನವೆಂಬರ್ 16 : ಚಿಕ್ಕಬಳ್ಳಾಪುರ, ಗೌರಿಬಿದನೂರು. 9845198404
- ನವೆಂಬರ್ 17 ರಿಂದ 23ರವರೆಗೆ
ಕರಾವಳಿ- ಮಲೆನಾಡು ( ಉಡುಪಿ, ಸಾಗರ, ಶಿವಮೊಗ್ಗ, ಹೊನ್ನಾವರ, ಅಂಕೋಲ) - ನವೆಂಬರ್ 24 ರಿಂದ 30ರವರೆಗೆ ಹೈದರಾಬಾದ್ ಕರ್ನಾಟಕ ( ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗಂಗಾವತಿ, ಸಿಂಧನೂರು, ರಾಯಚೂರು, ಗುಲ್ಬರ್ಗ)
ಇದಲ್ಲದೆ ಧಾರವಾಡ, ಹುಬ್ಬಳ್ಳಿ, ಇನ್ನೂ
ಹಲವು ಕಡೆ ಜಾಥಾ ನಡೆಸುವ ಉದ್ದೇಶವಿದೆ.
ನಮ್ಮೊಂದಿಗೆ ಕೈಜೋಡಿಸಿ.
ನಮ್ಮೊಂದಿಗೆ ಕೈಜೋಡಿಸಿ.
ದಯವಿಟ್ಟು ಈಗಲೇ ಬಿಡುವಿಟ್ಟುಕೊಳ್ಳಿ,
ಇನ್ನೂ ಎಲ್ಲೆಲ್ಲಿ ಹೇಗೆ (ಕ್ರಿಯಾಶೀಲವಾಗಿ) ಮಾಡಬಹದು ಯೋಚಿಸಿ ನಮಗೆ ತಿಳಿಸಿ,
ಈ ಪೋಸ್ಟ್ ಅನ್ನುಹಂಚಿಕೊಳ್ಳಿ,
ನಿಮ್ಮ ಸಕರಾತ್ಮಕ ಪ್ರತಿಕ್ರಿಯೆಯ ನೀರಿಕ್ಷೆಯಲ್ಲಿದ್ದೇವೆ.
– ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ. 7353770202,
ಇನ್ನೂ ಎಲ್ಲೆಲ್ಲಿ ಹೇಗೆ (ಕ್ರಿಯಾಶೀಲವಾಗಿ) ಮಾಡಬಹದು ಯೋಚಿಸಿ ನಮಗೆ ತಿಳಿಸಿ,
ಈ ಪೋಸ್ಟ್ ಅನ್ನುಹಂಚಿಕೊಳ್ಳಿ,
ನಿಮ್ಮ ಸಕರಾತ್ಮಕ ಪ್ರತಿಕ್ರಿಯೆಯ ನೀರಿಕ್ಷೆಯಲ್ಲಿದ್ದೇವೆ.
– ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ. 7353770202,
ಸ್ನೇಹಿತರೇ,
ನಾವು ಒಂದಿಷ್ಟು ಗೆಳೆಯರು
ಕೂಡಿಕೊಂಡು ಇಂದಿನ ಶಿಕ್ಷಣ ವ್ಯವಸ್ಥೆಯ ಸ್ಥಿತಿ-ಗತಿ, ಸಮಸ್ಯೆಗಳು, ಅಸಮಾನತೆಯ ಭೀಕರತೆ ಮತ್ತು ಸರ್ಕಾರಿ
ಶಾಲೆಗಳನ್ನು ಮುಚ್ಚುತ್ತಿರುವುದು, ಸಮಾನ ಶಿಕ್ಷಣದ ಅಗತ್ಯತೆಯ ಕುರಿತು ಜನರಿಗೆ ಮಾಹಿತಿ ಮುಟ್ಟಿಸಲು
40 ರಿಂದ 50 ನಿಮಿಷದ ಸಾಕ್ಷ್ಯಚಿತ್ರವೊಂದನ್ನು ತಯಾರಿಸುತ್ತಿದ್ದೇವೆ. ಇದಕ್ಕೆ ನಿಮ್ಮ ಸಲಹೆ ಸೂಚನೆಗಳನ್ನು
ನೀಡಿ. ಆಸಕ್ತಿಯಿದ್ದರೆ ನಮ್ಮೊಂದಿಗೆ ಕೈಜೋಡಿಸಿ.





No comments:
Post a Comment